•  
  •  
  •  
  •  
Index   ವಚನ - 1412    Search  
 
ಪ್ರಾಣಲಿಂಗಿಗೆ ವಾಯುವೆ ಅಂಗ, ಆ ಅಂಗಕ್ಕೆ ಸುಮನವೆ ಹಸ್ತ, ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿಯೇ ಕಳೆ, ಆ ಕಳೆಗೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶದ್ರವ್ಯಂಗಳನು ರೂಪು-ರುಚಿ-ತೃಪ್ತಿಯನರಿದು ಅನುಭಾವಭಕ್ತಿಯಿಂದರ್ಪಿಸಿ, ಆ ಸುಸ್ಪರ್ಶಪ್ರಸಾದವನು ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ, ನಿಮ್ಮ ಪ್ರಾಣಲಿಂಗಿ.
Transliteration Prāṇaliṅgige vāyuve aṅga, ā aṅgakke sumanave hasta, ā hastakke amūrtisādākhya, ā sādākhyakke ādiśakti, ā śaktige jaṅgamaliṅga, ā liṅgakke śāntiyē kaḷe, ā kaḷege tvagindriyave mukha, ā mukhakke sparśadravyaṅgaḷanu rūpu-ruci-tr̥ptiyanaridu anubhāvabhaktiyindarpisi, ā susparśaprasādavanu bhōgisi sukhisuttihanu kūḍalacennasaṅgā, nim'ma prāṇaliṅgi.