ಭಕ್ತನಾಗಬಹುದು, ಮಾಹೇಶ್ವರನಾಗಬಾರದು.
ಮಾಹೇಶ್ವರನಾಗಬಹುದು, ಪ್ರಸಾದಿಯಾಗಬಾರದು.
ಪ್ರಸಾದಿಯಾಗಬಹುದು, ಪ್ರಾಣಲಿಂಗಿಯಾಗಬಾರದು.
ಪ್ರಾಣಲಿಂಗಿಯಾಗಬಹುದು, ಶರಣನಾಗಬಾರದು.
ಶರಣನಾಗಬಹುದು, ಬಯಲನೆಯ್ದಬಾರದು.
ಕೂಡಲಚೆನ್ನಸಂಗಮದೇವಾ.
Transliteration Bhaktanāgabahudu, māhēśvaranāgabāradu.
Māhēśvaranāgabahudu, prasādiyāgabāradu.
Prasādiyāgabahudu, prāṇaliṅgiyāgabāradu.
Prāṇaliṅgiyāgabahudu, śaraṇanāgabāradu.
Śaraṇanāgabahudu, bayalaneydabāradu.
Kūḍalacennasaṅgamadēvā.