ರೂಪಾಗಿ ಬಂದುದ ಕಾಯದ ಕೈಯಲ್ಲಿ ಕೊಡುವುದು,
ರುಚಿಯಾಗಿ ಬಂದುದ ಮನದ ಕೈಯಲ್ಲಿ ಕೊಡುವುದು,
ತೃಪ್ತಿಯಾಗಿ ಬಂದುದ ಭಾವದ ಕೈಯಲ್ಲಿ ಕೊಡುವುದು,
ಅರ್ಪಿಸುವ ತೆರನಿದು ಪ್ರಸಾದಿಗಯ್ಯಾ.
"ಇಷ್ಟಲಿಂಗಾರ್ಪಿತಂ ರೂಪಂ ರುಚಿಃ ಪ್ರಾಣಸಮರ್ಪಿತಾ|
ತೃಪ್ತಿರ್ಭಾವಸಮಾಯುಕ್ತಾ ಅರ್ಪಿತಂ ತ್ರಿವಿಧಾತ್ಮಕಂ"||
ಎಂದುದಾಗಿ,
ರೂಪು ರುಚಿ ತೃಪ್ತಿಯ ಕೊಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ
ಮಹಾಪ್ರಸಾದಿಯಯ್ಯಾ.
Transliteration Rūpāgi banduda kāyada kaiyalli koḍuvudu,
ruciyāgi banduda manada kaiyalli koḍuvudu,
tr̥ptiyāgi banduda bhāvada kaiyalli koḍuvudu,
arpisuva teranidu prasādigayyā.
Iṣṭaliṅgārpitaṁ rūpaṁ ruciḥ prāṇasamarpitā|
tr̥ptirbhāvasamāyuktā arpitaṁ trividhātmakaṁ||
endudāgi,
rūpu ruci tr̥ptiya koḍaballaḍe
kūḍalacennasaṅgayyanalli
mahāprasādiyayyā.