ರೂಪಿಲ್ಲದ ರೂಪು, ನಿರ್ಣಯವಿಲ್ಲದ ನಿಷ್ಪತ್ತಿ,
ಸೀಮೆಯ ಮೀರಿದ ನಿಸ್ಸೀಮ, ಗಮನವಿಲ್ಲದ ಗಮ್ಯ,
ನುಡಿಯುಡಿಗಿದ ನಿಃಶಬ್ದ, ಪರವನರಿಯದ ಪರಿಣಾಮಿ
ಕೂಡಲಚೆನ್ನಸಂಗನ ಶರಣ ಪ್ರಭುದೇವರಿಗೆ
ನಮೋ ನಮೋ ಎನುತಿರ್ದೆನು.
Transliteration Rūpillada rūpu, nirṇayavillada niṣpatti,
sīmeya mīrida nis'sīma, gamanavillada gamya,
nuḍiyuḍigida niḥśabda, paravanariyada pariṇāmi
kūḍalacennasaṅgana śaraṇa prabhudēvarige
namō namō enutirdenu.