•  
  •  
  •  
  •  
Index   ವಚನ - 1646    Search  
 
ಶಿವ ಲೋಕವನಿಚ್ಛಿಸಿ ಶಿವಪೂಜೆಯಂ ಗೈದೊಡೆ ಮುಂದೆ ಶಿವಲೋಕವನೈದಿ ಅನಂತಕಾಲ ಶಿವಸುಖವನನುಭವಿಸುತಿರ್ದು, ಆ ಪುಣ್ಯವು ತೀರಲೊಡನೆ ಮರಳಿ ಧರೆಗಿಳಿದು ಪೂರ್ವಪುಣ್ಯಸಂಸ್ಕಾರದಿಂದ ಸತ್ಕುಲದಲ್ಲಿ ಹುಟ್ಟುತಿರ್ಪನು ನೋಡಾ! "ಅನೇಕಯುಗಸಾಹಸ್ರಂ ಭುಙ್ತೆ ಭೋಗಾನನೇಕಧಾ| ಪುಣ್ಯೇ ಕ್ಷಯೇ ಕ್ಷೀಣಪಾಪಃ ಕುಲೇ ಮಹತಿ ಜಾಯತೇ"|| ಎಂದುದಾಗಿ, ಶಿವಕುಲದಲ್ಲಿ ಹುಟ್ಟಿ ಶಿವಸಂಸ್ಕಾರ ಹೊಂದಿ ಸದ್ಗುರುವಿನಿಂದ ಲಿಂಗಸಾಮರಸ್ಯ ಪಡೆದು ಅಷ್ಟಾವರಣವೆ ಅಂಗ, ಪಂಚಾಚಾರವೆ ಪ್ರಾಣವಾಗಿ ನಡೆದು ಕಡೆಗೆ ಚಿರಸುಖಿಯಾಗುತಿರ್ಪನು ನೋಡಾ ಕೂಡಲಚೆನ್ನಸಂಗಮದೇವಾ.
Transliteration Śiva lōkavanicchisi śivapūjeyaṁ gaidoḍe munde śivalōkavanaidi anantakāla śivasukhavananubhavisutirdu, ā puṇyavu tīraloḍane maraḷi dharegiḷidu pūrvapuṇyasanskāradinda satkuladalli huṭṭutirpanu nōḍā! Anēkayugasāhasraṁ bhuṅte bhōgānanēkadhā| puṇyē kṣayē kṣīṇapāpaḥ kulē mahati jāyatē|| endudāgi, śivakuladalli huṭṭi śivasanskāra hondi sadguruvininda liṅgasāmarasya paḍedu aṣṭāvaraṇave aṅga, pan̄cācārave prāṇavāgi naḍedu kaḍege cirasukhiyāgutirpanu nōḍā kūḍalacennasaṅgamadēvā.