•  
  •  
  •  
  •  
Index   ವಚನ - 1647    Search  
 
ಶಿವಶರಣ ತಾನಾದ ಬಳಿಕ, ಹರಗಣಂಗಳಂಘ್ರಿಯಲ್ಲಿ ನಮ್ರಲಲಾಟನಾಗಿರಬೇಕು. ಪತಿವ್ರತೆ ತಾನಾದ ಬಳಿಕ, ವಲ್ಲಭನ ಸರ್ವೋಪಚಾರದಲ್ಲಿ ಲೀನೆಯಾಗಿರಬೇಕು. ಇದು ಕಾರಣ- ಶಿವಶರಣರು ಹರಗಣಂಗಳ ಕಂಡು ಮಣಿಯದಿದ್ದಡೆ ಕೂಡಲಚೆನ್ನಸಂಗಮದೇವರು ಕೊಡುವ ಮುಕ್ತಿಯಲ್ಲಿ ಮೌನರು ಕಾಣಾ ಸಿದ್ಧರಾಮಯ್ಯ.
Transliteration Śivaśaraṇa tānāda baḷika, haragaṇaṅgaḷaṅghriyalli namralalāṭanāgirabēku. Pativrate tānāda baḷika, vallabhana sarvōpacāradalli līneyāgirabēku. Idu kāraṇa- śivaśaraṇaru haragaṇaṅgaḷa kaṇḍu maṇiyadiddaḍe kūḍalacennasaṅgamadēvaru koḍuva muktiyalli maunaru kāṇā sid'dharāmayya.