ಶ್ರೀಗುರು ಲಿಂಗ ಜಂಗಮದ ಪಾದೋದಕ
ಪ್ರಸಾದವ ಕೊಂಡೆವೆಂಬರು.
ಅವರು ಕೊಟ್ಟ ಪರಿಯಾವುದು?
ನೀನುಕೊಂಡ ಪರಿಯಾವುದು?
ಆ ಗುರುವಿಂಗೆ ಜಂಗಮಪ್ರಸಾದವೆ ಬೇಕು,
ಆ ಲಿಂಗಕ್ಕೆ ಜಂಗಮಪ್ರಸಾದವೆ ಬೇಕು.
ಅದೆಂದೆಂತಡೆ:
"ಚರಪ್ರಸಾದಸ್ಸಂಗ್ರಾಹ್ಯೋ ಗುರುಲಿಂಗಜಂಗಮಾನಾಂ|
ತದುಚ್ಛಿಷ್ಟಂ ತು ಸಂಪ್ರಾಪ್ಯ ಭವಾನ್ಮುಕ್ತಿಸ್ತದಾ ಭವೇತ್"|| ಎಂದುದಾಗಿ
ಕೂಡಲಚೆನ್ನಸಂಗಯ್ಯಾ,
ನಿಮ್ಮ ಜಂಗಮಪ್ರಸಾದವಿಲ್ಲದಿರ್ದಡೆ
ಗುರುವಾಗಬಾರದು, ಲಿಂಗವಾಗಬಾರದು,
ಜಂಗಮವಾಗಬಾರದು.
Transliteration Śrīguru liṅga jaṅgamada pādōdaka
prasādava koṇḍevembaru.
Avaru koṭṭa pariyāvudu?
Nīnukoṇḍa pariyāvudu?
Ā guruviṅge jaṅgamaprasādave bēku,
ā liṅgakke jaṅgamaprasādave bēku.
Adendentaḍe:
Caraprasādas'saṅgrāhyō guruliṅgajaṅgamānāṁ|
taducchiṣṭaṁ tu samprāpya bhavānmuktistadā bhavēt|| endudāgi
kūḍalacennasaṅgayyā,
nim'ma jaṅgamaprasādavilladirdaḍe
guruvāgabāradu, liṅgavāgabāradu,
jaṅgamavāgabāradu.