•  
  •  
  •  
  •  
Index   ವಚನ - 1710    Search  
 
ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ ಅರಸಲಹುದೆ? ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ? "ಶಿವಭಕ್ತ ಸಮಾವೇಶೇ ನ ಜಾತಿ ಪರಿಕಲ್ಪನಾ| ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ"|| ಎಂದುದಾಗಿ, ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ.
Transliteration Sādhakadeseyalli kulavanarasabahudallade, sid'dhadeseyalli arasalahude? Halavu jātiya kaṭṭigeya suṭṭalli agniyondallade alli kaṭṭigegaḷa kuruhu kāmbude? Śivabhakta samāvēśē na jāti parikalpanā| indhanēṣvagnidagdhēṣu kō vā bhēdaḥ prakītryatē|| endudāgi, śivajñānasid'dharāda śivabhaktaralli pūrvajātiyanarasuva aremaruḷaranēnembe kūḍalacennasaṅgamadēvā.