ಸಾಯುವರ ಸತ್ತವರು ಹೊತ್ತರು,
ತಲೆಯಿಲ್ಲದವರತ್ತರು,
ಕೈಯಿಲ್ಲದವರು ಹಿಡಿದರು,
ಕಾಲಿಲ್ಲದವರು ಕೊಂಡೊಯ್ದರು,
ಕಣ್ಣಿಲ್ಲದವರು ಕಂಡರು,
ಕಿವಿಯಿಲ್ಲದವರು ಕೇಳಿದರು.
ಇದು ಕಾರಣ ಕೂಡಲಚೆನ್ನಸಂಗಾ
ನಿಮ್ಮ ಶರಣರು ಸರ್ವಾಂಗಲಿಂಗಿಗಳು.
Transliteration Sāyuvara sattavaru hottaru,
taleyilladavarattaru,
kaiyilladavaru hiḍidaru,
kālilladavaru koṇḍoydaru,
kaṇṇilladavaru kaṇḍaru,
kiviyilladavaru kēḷidaru.
Idu kāraṇa kūḍalacennasaṅgā
nim'ma śaraṇaru sarvāṅgaliṅgigaḷu.