ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ,
ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ,
ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ,
ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ,
ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಯ ಮಕ್ಕಳಯ್ಯಾ,
ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ,
ಜಂಗಮ ಬಂದ ಒರವ, ನಿಂದ ನಿಲುಕಡೆಯ ನೋಡಿ,
ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್‍ಜ್ಞಾನವನರಿವವರು
ಕೂಡಲಚೆನ್ನಸಂಗನ ಶರಣರಯ್ಯಾ.
Transliteration Hāḍi māḍuvarella hādaragittiya makkaḷayyā,
kūḍi māḍuvarella kuṇṭaṇigittiya makkaḷayyā,
bēḍi māḍuvarella bēḍitiya makkaḷayyā,
ḍambakatanadalli māḍuvarella ḍombagittiya makkaḷayyā,
acca prasādigaḷembavarella muccagittaya makkaḷayyā,
samayācāradallippavarella sam'magāriya makkaḷayyā,
jaṅgama banda orava, ninda nilukaḍeya nōḍi,
māḍi nīḍi svayānubhāvada samyagjñānavanarivavaru
kūḍalacennasaṅgana śaraṇarayyā.