•  
  •  
  •  
  •  
Index   ವಚನ - 1743    Search  
 
ಹಾಡುವಾತ ಜಂಗಮನಲ್ಲ, ಕೇಳುವಾತ ಭಕ್ತನಲ್ಲ. ಹಾಡಿ ಬೇಡುವನೆ ಜಂಗಮ? ಹಾಡಿದಡೆ ಕೇಳಿ ಕೊಡುವನೆ ಭಕ್ತ? ಹಾಡುವಂಗೆಯೂ ಕೇಳುವಂಗೆಯೂ ಸ್ವಾಮಿ ಭೃತ್ಯಸಂಬಂಧದ ಸಕೀಲ ತೋರದು. ಇದು ಕಾರಣ-ಕೂಡಲಚೆನ್ನಸಂಗಯ್ಯಾ ನಮ್ಮಲ್ಲಿ ಇವರಿಬ್ಬರು ಉಭಯಭ್ರಷ್ಟರು.
Transliteration Hāḍuvāta jaṅgamanalla, kēḷuvāta bhaktanalla. Hāḍi bēḍuvane jaṅgama? Hāḍidaḍe kēḷi koḍuvane bhakta? Hāḍuvaṅgeyū kēḷuvaṅgeyū svāmi bhr̥tyasambandhada sakīla tōradu. Idu kāraṇa-kūḍalacennasaṅgayyā nam'malli ivaribbaru ubhayabhraṣṭaru.