ಹೃದಯದೊಳಿಪ್ಪ ಮಹಾಲಿಂಗಜ್ಯೋತಿಯ ಬೆಳಗು,
ಪಂಚೇಂದ್ರಿಯಂಗಳಲ್ಲಿ ಪ್ರಭಾವಿಸಿ
ತೋರುವ ಬೆಳಗು, ಒಂದೆ ಕಾಣಿ ಭೋ.
ಒಂದು ಮೂರಾಗಿ, ಮೂರು ತಾನಾರಾಗಿ
ಆರು ಮೂವತ್ತಾರಾಗಿ ಮೂವತ್ತಾರು
ಇನ್ನೂರುಹದಿನಾರಾಗಿ, ಬೇರುವರಿದು ವಿಸ್ತಾರವ ಪಡೆದವಲ್ಲಾ!
ವಿಶ್ವಾಸದಿ ಬೆಳಗುವ ಬ್ರಹ್ಮಕ್ಕೂ ಗಣಿತವುಂಟೆ?
ಅಗಣಿತವೆಂದು ಅಗೋಚರವೆಂದು ಹೇಳುವರಲ್ಲದೆ,
ದೃಶ್ಯವಾಗಿ ಕಾಬವರುಂಟೆ? ದೃಗುದ್ಯಶ್ಯವಲ್ಲ
ಮಹಾದಾನಿ ಕೂಡಲಚೆನ್ನಸಂಗಮದೇವ.
Transliteration Hr̥dayadoḷippa mahāliṅgajyōtiya beḷagu,
pan̄cēndriyaṅgaḷalli prabhāvisi
tōruva beḷagu, onde kāṇi bhō.
Ondu mūrāgi, mūru tānārāgi
āru mūvattārāgi mūvattāru
innūruhadinārāgi, bēruvaridu vistārava paḍedavallā!
Viśvāsadi beḷaguva brahmakkū gaṇitavuṇṭe?
Agaṇitavendu agōcaravendu hēḷuvarallade,
dr̥śyavāgi kābavaruṇṭe? Dr̥gudyaśyavalla
mahādāni kūḍalacennasaṅgamadēva.