•  
  •  
  •  
  •  
Index   ವಚನ - 1752    Search  
 
ಹೆಣ್ಣ ಬಿಟ್ಟಡೇನು ಹೊನ್ನಿನಾಸೆ ಉಳ್ಳನ್ನಬರ? ಅಲ್ಲಿಗೆ ಹಿರಿಯತನ ಸಾಲದು. ಹೊನ್ನ ಬಿಟ್ಟಡೇನು ಮಣ್ಣಿನಾಸೆ ಉಳ್ಳನ್ನಬರ? ಅಲ್ಲಿಗೆ ಹಿರಿಯತನ ಸಾಲದು. ಅವುಗಳೊಳಗೊಂದ ಹಿಡಿದಡೆಯೂ ಆ ತ್ರಿವಿಧವ ಹಿಡಿದವ, ಆ ಮಾಯೆ ಒಂದ ಬಿಟ್ಟೊಂದಿರದಾಗಿ. ಅವನತಿಗಳೆದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಕೂಡಲಚೆನ್ನಸಂಗಮದೇವಾ ಈ ತ್ರಿವಿಧಮಲವ ಕಳೆದು ಸುಳಿವ ನಿಜಸುಳುಹಿಂಗೆ ನಮೋ ನಮೋ ಎಂಬೆನಯ್ಯಾ.
Transliteration Heṇṇa biṭṭaḍēnu honnināse uḷḷannabara? Allige hiriyatana sāladu. Honna biṭṭaḍēnu maṇṇināse uḷḷannabara? Allige hiriyatana sāladu. Avugaḷoḷagonda hiḍidaḍeyū ā trividhava hiḍidava, ā māye onda biṭṭondiradāgi. Avanatigaḷedallade bhavaṁ nāstiyāgadu. Idu kāraṇa, kūḍalacennasaṅgamadēvā ī trividhamalava kaḷedu suḷiva nijasuḷuhiṅge namō namō embenayyā.