ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ;
ಬೆಳೆದಡೆ ಮನೆಗೆ ತರಲಿಲ್ಲ; ತರಲಿಲ್ಲದ ಮತ್ತೆ ಅಡಲಿಲ್ಲ;
ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ,
ಅದು ರಾಕ್ಷಸವಂಶ ಭೂತವಾದ ಕಾರಣ.
ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ವ್ರತಮುಕ್ತನ ನೇಮ.
Transliteration Aja em'me hālabiṭṭalli hēraṇḍava beḷeyalilla;
beḷedaḍe manege taralilla; taralillada matte aḍalilla;
adu dīpada beḷagiṅge dēvarige nihitavalla,
adu rākṣasavanśa bhūtavāda kāraṇa.
Kaṇḍuda biṭṭu kāṇadudanarasikoḷabēku.
Ācārave prāṇavāda rāmēśvaraliṅgadalli
vratamuktana nēma.