ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ
ತಮ್ಮ ತಮ್ಮ ಭಾವದ ಶೀಲ.
ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ
ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ.
ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು
ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,
ಬಸವಣ್ಣನ ಮಣಿಹ ಎಂದಿಂಗೆ ಸಲೆ ಸಂದು
ನಿಂದಿಹ ವೇಳೆಯನರಿವನ್ನಕ್ಕ
ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ.
Transliteration Ēḷunūreppattu amaragaṇaṅgaḷigellakkū
tam'ma tam'ma bhāvada śīla.
Gaṅgevāḷuka samārudrarellakkū
tam'ma tam'ma manakke sanda sanda nēma.
Martyakke banda pramatharellarū tāvu bandudanaridu
mundina payaṇakke endembuda kaṇḍu,
basavaṇṇana maṇiha endiṅge sale sandu
nindiha vēḷeyanarivannakka
tāvu koṇḍa vratadalli bhaya bhaṅgavillade nindirabēku,
ācārave prāṇavāda rāmēśvaraliṅgadoḷagahannakka.