ಒಡೆಯರ ಸಮಯಾಚಾರವೆಂದ ಮತ್ತೆ
ಹಲ್ಲುಕಡ್ಡಿ, ದರ್ಪಣ, ನಖಚಣ, ಮೆಟ್ಟಡಿ ಮುಂತಾದ
ತಾ ಮುಟ್ಟುವ, ತಾ ತಟ್ಟುವ, ಸೋಂಕುವ,
ತನ್ನಯ ಸಂದೇಹ ಮುಂತಾದ
ದಿಟ ಮೊದಲು ಹುಸಿ ಕಡೆಯಾದ ದ್ರವ್ಯವೆಲ್ಲವನು ಕೊಟ್ಟು
ತಾ ಕೊಳ್ಳದಿದ್ದನಾಯಿತ್ತಾದಡೆ
ಬೈವುದಕ್ಕೆ ಬಾಯಿ ತೆರಪಿಲ್ಲ; ಹೊಯ್ವದಕ್ಕೆ ಕೈಗೆ ಅಡಹಿಲ್ಲ.
ನೋಡುವ ಕಣ್ಣನೆ ಮುಚ್ಚುವೆ,
ಈ ನೋವನಿನ್ನಾರಿಗೂ ಹೇಳೆ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ನೀನೇ ಬಲ್ಲೆ.
Transliteration Oḍeyara samayācāravenda matte
hallukaḍḍi, darpaṇa, nakhacaṇa, meṭṭaḍi muntāda
tā muṭṭuva, tā taṭṭuva, sōṅkuva,
tannaya sandēha muntāda
diṭa modalu husi kaḍeyāda dravyavellavanu koṭṭu
tā koḷḷadiddanāyittādaḍe
baivudakke bāyi terapilla; hoyvadakke kaige aḍahilla.
Nōḍuva kaṇṇane muccuve,
ī nōvaninnārigū hēḷe.
Ācārave prāṇavāda rāmēśvaraliṅgā, nīnē balle.