•  
  •  
  •  
  •  
Index   ವಚನ - 31    Search  
 
ಒಡೆಯರು ಭಕ್ತರಿಗೆ ಸಲುವ ಸಹಪಂಕ್ತಿಯಲ್ಲಿ ಗುರುವೆಂದು, ಅರಸೆಂದು, ತನ್ನ ಪರಿಸ್ಪಂದದವರೆಂದು, ರಸದ್ರವ್ಯವನೆಸಕದಿಂದ ನೀಡಿದೊಡೆ, ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ; ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ. ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ, ಶಿವಗಣಪಂಕ್ತಿಯ ನಡುವೆ ತಾ ಕುಳ್ಳಿರ್ದು ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
Transliteration Oḍeyaru bhaktarige saluva sahapaṅktiyalli guruvendu, arasendu, tanna parispandadavarendu, rasadravyavanesakadinda nīḍidoḍe, ada nānaridu kaikoṇḍaḍe kisukuḷada pākuḷakiccaisidante; alpa jihvālampaṭakke sikkida matsya bandhanadi sattante. Idanaridu bhaktanāgali, guruvāgali, jaṅgamavāgali, śivagaṇapaṅktiya naḍuve tā kuḷḷirdu migilāgi ṣaḍurasānnavādiyāda supadārthaṅgaḷanikkisikoṇḍu tindanādaḍe ācārave prāṇavāda rāmēśvaraliṅgakke dūra.