ಆವುದಾನೊಂದು ಕಾರಣದಿಂದ
ಉರಿಯ ಧೂಮಾವರಣವಿಲ್ಲದೆ ತಮೋಮಯವಾಗಿಹುದು
ದೀಪವೆ ಧೂಮಾವರಣವಿಲ್ಲದೆ ಪ್ರಕಾಶಮಯವಾಗಿಹುದು.
ಅದು ಕಾರಣದಿಂದ ಶಕ್ತಿಯೆ ತಮೋಪಾಸನೆಯ ಕೂಡಿಹುದು
ಭಕ್ತಿಯ ಜ್ಞಾನದೊಡಗೂಡಿಹುದು.
ಶಾಂತವೀರೇಶ್ವರಾ
Transliteration Āvudānondu kāraṇadinda
uriya dhūmāvaraṇavillade tamōmayavāgihudu
dīpave dhūmāvaraṇavillade prakāśamayavāgihudu.
Adu kāraṇadinda śaktiye tamōpāsaneya kūḍ'̔ihudu
bhaktiya jñānadoḍagūḍ'̔ihudu.
Śāntavīrēśvarā