ಶಕ್ತಿಯೆ ಪ್ರವೃತ್ತಿ ಎಂದು ಹೇಳಲ್ಪಡುತ್ತಿಹುದು.
ಭಕ್ತಿಯೆ ನಿವೃತ್ತಿ ಎಂದು ಹೇಳಲ್ಪಡುತ್ತಿಹುದು.
ಶಕ್ತಿಯಿಂದ ಸಕಲ ಪ್ರಪಂಚದ ಸೃಷ್ಠಿಯಾಗುವುದು.
ಭಕ್ತಿಯಿಂದ ಸಕಲ ಪ್ರಪಂಚದ ಲಯವಾಗುವದಯ್ಯ
ಶಾಂತವೀರೇಶ್ವರಾ
Transliteration
Śaktiye pravr̥tti endu hēḷalpaḍuttihudu.
Bhaktiye nivr̥tti endu hēḷalpaḍuttihudu.
Śaktiyinda sakala prapan̄cada sr̥ṣṭhiyāguvudu.
Bhaktiyinda sakala prapan̄cada layavāguvadayya
śāntavīrēśvarā