ಅದು ಕಾರಣ,
ಕ್ರಿಯೋಪದೇಶವಿಲ್ಲದೆ ಲಿಂಗವನು ಅರ್ಚಿಸಲಾಗದು,
ಅದೆಂತೆಂದೊಡೆ, ಚತುರ್ವೋದಿಯಾದಡು
ಶಿವದೀಕ್ಞಾ ರಹಿತನು ಶಿವಲಿಂಗವನು
ಎತ್ತಲಾನು ಮುಟ್ಟುವನೆ? ಮುಟ್ಟಿದೊಡೆ,
ಅನೇಕ ಬ್ರಹ್ಮ ಕೋಟಿ ಕಲ್ಪ ಸಹಸ್ರಂಗಳು
ಬ್ರಹ್ಮರಾಕ್ಷಸನಾಗಿ ಹುಟ್ಟುತ್ತಮಿಹನು
ಶಾಂತವೀರೇಶ್ವರಾ
Transliteration Adu kāraṇa,
kriyōpadēśavillade liṅgavanu arcisalāgadu,
adentendoḍe, caturvōdiyādaḍu
śivadīkñā rahitanu śivaliṅgavanu
ettalānu muṭṭuvane? Muṭṭidoḍe,
anēka brahma kōṭi kalpa sahasraṅgaḷu
brahmarākṣasanāgi huṭṭuttamihanu
śāntavīrēśvarā