ಕೊಡುವದು ಬೇಡ ಎಂದಲ್ಲಿ ಸರ್ವರ ಒಡಗೂಡಿ ಕಾಡುವುದು.
ನಿಂದಲ್ಲಿ ಮತ್ತಾರಾಗುಳಯದ ಬಾಗಿಲ ಕಾಯ್ದಲ್ಲಿ
ಹೆಚ್ಚು ಕುಂದೆಂಬ ಆತ್ಮನಭೀಷ್ಟಿಕೆಯ ಬಿಟ್ಟಲ್ಲಿ
ಗೆಲ್ಲ ಸೋಲಕ್ಕೆ ಕಲ್ಲೆದೆಯಾಗದಲ್ಲಿ
ಇಂತಿವನೆಲ್ಲವನರಿತು ಮರೆದಲ್ಲಿ
ನಿಜ ಬಲ್ಲವನ ಭರಿತಾರ್ಪಣ.
ಹೀಗಲ್ಲದೆ ಎಲ್ಲರ ಕಂಡು ಅವರ ಸೊಲ್ಲಿಗೆ ಸೋತು
ಅಲ್ಲಿಗಲ್ಲಿಗೆ ತಕ್ಕವನಹ ಕಳ್ಳನ
ಭರಿತಾರ್ಪಣ ದ್ರವ್ಯದಲ್ಲಿಯೆ ಉಳಿಯಿತ್ತು.
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದಲ್ಲಿಗೆ ದೂರಸ್ಥನಾದ.
Transliteration Koḍuvadu bēḍa endalli sarvara oḍagūḍi kāḍuvudu.
Nindalli mattārāguḷayada bāgila kāydalli
heccu kundemba ātmanabhīṣṭikeya biṭṭalli
gella sōlakke kalledeyāgadalli
intivanellavanaritu maredalli
nija ballavana bharitārpaṇa.
Hīgallade ellara kaṇḍu avara sollige sōtu
alligallige takkavanaha kaḷḷana
bharitārpaṇa dravyadalliye uḷiyittu.
Ācārave prāṇavāda
rāmēśvaraliṅgadallige dūrasthanāda.