ವೀರಶೈವ ದೀಕ್ಷಾನ್ವಿತನಾದವನು
ಪ್ರಾಣಲಿಂಗ ಪತನವಾದೊಡನೆ ಅರಸಿ ಧರಿಸಿಕೊಳ್ಳಬೇಕು.
ಅಲ್ಲದೆ ಸಂದೇಹದಿಂದ ಚರ ಪಾದೋದಕಮಂ ಪಡೆದು
ಬೇರೊಂದು ಲಿಂಗಕ್ಕಭಿಷೇಕಂಗೈದು ತಾನೀಂಟಿ
ಲಿಂಗವ ಧರಿಸಿಕೊಂಬೆಡೆ ರೌರವ ನರಕವೆಂದನಯ್ಯ
ಶಾಂತವೀರೇಶ್ವರಾ
Transliteration Vīraśaiva dīkṣānvitanādavanu
prāṇaliṅga patanavādoḍane arasi dharisikoḷḷabēku.
Allade sandēhadinda cara pādōdakamaṁ paḍedu
bērondu liṅgakkabhiṣēkaṅgaidu tānīṇṭi
liṅgava dharisikombeḍe raurava narakavendanayya
śāntavīrēśvarā