ಬಳಿಕ ಲಿಂಗಧಾರಣ ಸ್ಥಲವನು ಸಮಾಪ್ತಿಯ ಮಾಡಿ
ಲಿಂಗಧಾರಣ ಸಂಪನ್ನನು ಭಸ್ಮವ ಧರಿಸಬೇಕೆಂದು
ಮುಂದೆ ಭಸ್ಮಧಾರಣವನು ಸೂಚಿಸುತ್ತಿರ್ದನಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಲಿಂಗಧಾರಣ ಸಂಪತ್ತಿಯುಳ್ಳವಂಗೆ
ಪರಬ್ರಹ್ಮದೊಡನೆ ಎಡೆಬಿಡದೆ ಚಿತ್ತನ ಪ್ರಕಾಶ ಸ್ವರೂಪದ ಭಸ್ಮಧಾರಣವ ಮಾಡತಕ್ಕದ್ದು
Transliteration Baḷika liṅgadhāraṇa sthalavanu samāptiya māḍi
liṅgadhāraṇa sampannanu bhasmava dharisabēkendu
munde bhasmadhāraṇavanu sūcisuttirdanayya
śāntavīrēśvarā
sūtra: Ī prakāradinda liṅgadhāraṇa sampattiyuḷḷavaṅge
parabrahmadoḍane eḍebiḍade cittana prakāśa svarūpada bhasmadhāraṇava māḍatakkaddu