ಸಮಯಾಚಾರ ಮೀರಿದವನಾಗಿರಲಿ
ದುರಾಚಾರ ತತ್ಪರನಾದರಾಗಲಿ
ಶಿವನಿಲ್ಲವೆಂಬ ನಾಸ್ತಿಕನಾದರಾಗಲಿ
ಎತ್ತಲಾನು ಭಸ್ಮತ್ತಿಪುಂಡ್ರವ ಧರಿಸಿದವನು
ಸಮಸ್ತ ಪಾಪಂಗಳಿಂದೆ ಮುಕ್ತನಾಗುವನಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರರಿಂದ ಮಹಾಜ್ಞಾನ ಭಸ್ಮವನು ಸತ್ಕ್ರಿಯಾ ಮುಖದಿ ಧರಿಸಿದಂತ ಲಿಂಗಕ್ರಿಯಾ ಸಂಪನ್ನಂಗೆ ಶಿವಜ್ಞಾನ ಚಕ್ಷುವಿನಿಂದ ಹುಟ್ಟಿದ ರುದ್ರಾಕ್ಷೆಯ ಧಾರಣೆಯಬಹುದು. ಮುಂದೆ “ರುದ್ರಾಕ್ಷೆ ಧಾರಣಸ್ಥಲ”
Transliteration Samayācāra mīridavanāgirali
durācāra tatparanādarāgali
śivanillavemba nāstikanādarāgali
ettalānu bhasmattipuṇḍrava dharisidavanu
samasta pāpaṅgaḷinde muktanāguvanayya
śāntavīrēśvarā
Sūtra: Ī prakārarinda mahājñāna bhasmavanu satkriyā mukhadi dharisidanta liṅgakriyā sampannaṅge śivajñāna cakṣuvininda huṭṭida rudrākṣeya dhāraṇeyabahudu. Munde “rudrākṣe dhāraṇasthala”