ಮುನ್ನ ತ್ರಿಪುರ ಸಂಹಾರಕ್ಕೊಸ್ಕರ [ಶಿವನು]
ಉನ್ಮೀಲಿತ ನೇತ್ರಂಗಳುಳ್ಳಾತನಾ[ದ].
ಆ ಚಂದ್ರ ಸೂರ್ಯಗ್ನಿ ನೇತ್ರಗಳ ಉದಕ ಬಿಂದುಗಳು
ಭೂಮಿಯಲ್ಲಿ ಬಿದ್ದವು;
ಆ ಜಲಬಿಂದುಗಳು ಸಮಸ್ತ ಲೋಕಂಗಳನು
ಅನುಗ್ರಹಿಸಲು ರುದ್ರಾಕ್ಷಿ ವೃಕ್ಷಂಗಳಾಗಿ ಹುಟ್ಟಿದವಯ್ಯ
ಶಾಂತವೀರೇಶ್ವರಾ
Transliteration Munna tripura sanhārakkoskara [śivanu]
unmīlita nētraṅgaḷuḷḷātanā[da].
Ā candra sūryagni nētragaḷa udaka bindugaḷu
bhūmiyalli biddavu;
ā jalabindugaḷu samasta lōkaṅgaḷanu
anugrahisalu rudrākṣi vr̥kṣaṅgaḷāgi huṭṭidavayya
śāntavīrēśvarā