ಬಳಿಕಾ ಪಂಚಾಕ್ಷರ ಮಧ್ಯಸ್ಥನಾದ
ಶಿವ ಶಬ್ದವಿಗ್ರಹವೆಂತೆಂದೊಡೆ,
ಸಚ್ಚಿದಾನಂದವೆ ಸ್ವರೂಪವಾಗುಳ್ಳ,
ಸ್ವತಂತ್ರಶೀಲನಾದ ಪರಮೇಶ್ವರನು
ಮೊದಲೆ ಆಣವ ಮಾಯಾ ಕಾರ್ಮಿಕವೆಂಬ
ಮಲತ್ರಯದ ವಿಯೋಗದಿಂದ
ಅನಾದಿಯಿಂದ ನಿರ್ಮಲತ್ವ ಉಳ್ಳಾತನಾದ ಕಾರಣ
ಶಿವನೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Baḷikā pan̄cākṣara madhyasthanāda
śiva śabdavigrahaventendoḍe,
saccidānandave svarūpavāguḷḷa,
svatantraśīlanāda paramēśvaranu
modale āṇava māyā kārmikavemba
malatrayada viyōgadinda
anādiyinda nirmalatva uḷḷātanāda kāraṇa
śivanendu hēḷuvarayya
śāntavīrēśvarā