ಇನ್ನೀ ಹಲವು ಮಾತುಗಳಿಂದೇನು,
ಆವನಾನೊಬ್ಬ ಮಹಾ ಪುರಷನು ಮಹಾಭಕ್ತಿಯಿಂದ
ದೇವಾದಿ ದೇವನಾದ ಪರಮೇಶ್ವರನನು ಪೂಜಿಸುತ್ತ
ಮೊದಲಲ್ಲಿ ‘ಓಂ’ ಕಾರದೊಡನೆ ಕೂಡಿದ ‘ನಮಃ ಶಿವಾಯ’ ಎಂಬ
ಈ ಮಹಾ ಮಂತ್ರವ ಜಪಿಸುವನೊ ಅವನು
ಪಂಚಪಾಶಗಳಿಂದ ಪಾರಾಗಿ
ಮೋಕ್ಷಸಂಪತ್ತಿಯನು ಎಯ್ದುವನಯ್ಯ
ಶಾಂತವೀರೇಶ್ವರಾ
Transliteration (Vachana in Roman Script)Innī halavu mātugaḷindēnu,
āvanānobba mahā puraṣanu mahābhaktiyinda
dēvādi dēvanāda paramēśvarananu pūjisutta
modalalli ‘ōṁ’ kāradoḍane kūḍida ‘namaḥ śivāya’ emba
ī mahā mantrava japisuvano avanu
pan̄capāśagaḷinda pārāgi
mōkṣasampattiyanu eyduvanayya
śāntavīrēśvarā
Read More