ಎನ್ನಂಗದಲ್ಲಿ ಲಿಂಗವಾಗಿ, ವಾಕ್ಕಿನಲ್ಲಿ ಮಂತ್ರವಾಗಿ
ಹೃದಯದಲ್ಲಿ ಪ್ರಾಣಲಿಂಗವಾಗಿ
ಆತ್ಮನಲ್ಲಿ ಭಾವಲಿಂಗವಾಗಿ
ಎನ್ನ ಷಡಿಂದ್ರಿಯಂಗಳಲ್ಲಿ ಷಡ್ವಿಧಮಂತ್ರಂಗಳಾಗಿ
ಎನ್ನ ನವಚಕ್ರಗಳಲ್ಲಿ ನವಲಿಂಗಗಳಾಗಿಪ್ಪಿರಯ್ಯ.
ನೀನು ಷಡ್ಲಿಂಗ ಷಟ್ಸಾದಾಖ್ಯ ಸ್ವರೂಪನಾದಲ್ಲಿ
ನಾನು ಷಡಂಗ ಷಡ್ವಿಧ ಸ್ವರೂಪನಾಗಿಪ್ಪೆನಯ್ಯ
ಶಾಂತವೀರೇಶ್ವರಾ
Transliteration Ennaṅgadalli liṅgavāgi, vākkinalli mantravāgi
hr̥dayadalli prāṇaliṅgavāgi
ātmanalli bhāvaliṅgavāgi
enna ṣaḍindriyaṅgaḷalli ṣaḍvidhamantraṅgaḷāgi
enna navacakragaḷalli navaliṅgagaḷāgippirayya.
Nīnu ṣaḍliṅga ṣaṭsādākhya svarūpanādalli
nānu ṣaḍaṅga ṣaḍvidha svarūpanāgippenayya
śāntavīrēśvarā