ಶಿವಭಕ್ತಿ ವಿರಹಿತನಾದವನಿಗೆ ಪುಣ್ಯ
ಕರ್ಮವಾಯಿತ್ತಾದರೂ ನಿಷ್ಫಲವು.
ಶಿವಭಕ್ತಿ ವಿರಹಿತನಾದ ಬ್ರಹ್ಮನಿಗಾದರೂ
ಮಹಾಯಜ್ಞದಲ್ಲಿ ಸತ್ಕರ್ಮವು ವಿಪರೀತ ಫಲ ಉಳ್ಳುದಹುದು.
ಶಿವಭಕ್ತಯುಕ್ತವಾಗಿ ಮಾಡಿದ
ದುಃಕರ್ಮವೆ ಸತ್ಕರ್ಮವೆಂತೆಂದೊಡೆ:
ಪಾಪಕೃತ್ಯ ಉಳ್ಳವನಾದರೆಯು
ಶಿವಭಕ್ತಿಯಿಂದ ಶುದ್ಧಾಂತನಾಗುವನು.
ಪೂರ್ವದಲ್ಲಿ ಚಂಡೇಶ ಪಿಳ್ಳೆಯು
ತಂದೆಯ ಕೊಂದವನಾದರೂ ಶಿವಭಕ್ತಿಯಿಂದ
ಹೀಂಗೆ ಶಿವಸ್ವರೂಪಾದನು.
ಅದು ಕಾರಣ ಶಿವಭಕ್ತರಿಗೆ ಕರ್ಮಪಾಶವಿಲ್ಲವಯ್ಯ
ಶಾಂತವೀರೇಶ್ವರಾ
Transliteration Śivabhakti virahitanādavanige puṇya
karmavāyittādarū niṣphalavu.
Śivabhakti virahitanāda brahmanigādarū
mahāyajñadalli satkarmavu viparīta phala uḷḷudahudu.
Śivabhaktayuktavāgi māḍida
duḥkarmave satkarmaventendoḍe:
Pāpakr̥tya uḷḷavanādareyu
śivabhaktiyinda śud'dhāntanāguvanu.
Pūrvadalli caṇḍēśa piḷḷeyu
tandeya kondavanādarū śivabhaktiyinda
hīṅge śivasvarūpādanu.
Adu kāraṇa śivabhaktarige karmapāśavillavayya
śāntavīrēśvarā