ಮತ್ತಮಾ ಪ್ರಸಾದ ಚತುರ್ವಿಧವನೆ ವಿವರುಸುತ್ತಿರ್ಪನೆಂತನೆ,
ಗ್ರಾಮವು ಕ್ಷೇತ್ರಂಗಳು ಮೊದಲಾದವು.
ದಾಸಿಯರು ಬಂಟರು ಎಂಬ ನಾಲ್ಕು ದೇವತ್ವವೆನಿಸಿಕೊಂಬವು.
ಬಂಗಾರ ಬೆಳ್ಳಿಯು ರತ್ನ ಮೊದಲಾದವು
‘ದೇವ ದ್ರವ್ಯ’ವೆಂದು ಹೇಳುವರು.
ಆವುದಾನೊಂದು ಪತ್ರೆಯು ಪುಷ್ಪವು
ಹಣ್ಣು ಉದಕವು ಅನ್ನಪಾನಾದಿಗಳು
ದೇವಂಗೋಸ್ಕರ ಅರೋಪಿಸಿದ
ಆ ಸಮಸ್ತ ನೈವೇದ್ಯವೆಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Mattamā prasāda caturvidhavane vivarusuttirpanentane,
grāmavu kṣētraṅgaḷu modalādavu.
Dāsiyaru baṇṭaru emba nālku dēvatvavenisikombavu.
Baṅgāra beḷḷiyu ratna modalādavu
‘dēva dravya’vendu hēḷuvaru.
Āvudānondu patreyu puṣpavu
haṇṇu udakavu annapānādigaḷu
dēvaṅgōskara arōpisida
ā samasta naivēdyavendu hēḷuvarayya
śāntavīrēśvarā