ಆ ಪರಮಾತ್ಮನಿಗೆ ಅರ್ಪಿತವಾದ ಪುಷ್ಪಮಾಲೆಯು
ಅನ್ನ ಪಾನಾದಿಗಳು ನಿವೇದಿತವೆಂದು ಹೇಳುವರು.
ಉತ್ಕರ್ಷವಾದ ಪಾಪ ಹರವಾದ
ಆ ಪ್ರಸಾದ ಸೇವನೆಯಿಂದ
ಮುಕ್ತಿ ಎಂದು ಹೇಳುವರಯ್ಯ
ಶಾಂತವೀರೇಶ್ವರಾ
Transliteration Ā paramātmanige arpitavāda puṣpamāleyu
anna pānādigaḷu nivēditavendu hēḷuvaru.
Utkarṣavāda pāpa haravāda
ā prasāda sēvaneyinda
mukti endu hēḷuvarayya
śāntavīrēśvarā