•  
  •  
  •  
  •  
Index   ವಚನ - 582    Search  
 
ಪುಣ್ಯಕರ್ಮ, ಪಾಪಕರ್ಮ ಜ್ಞಾನಕರ್ಮ, ಪ್ರಸಾದಕರ್ಮವೆಂಬೀ ಚತುರ್ವೀಧ ಕರ್ಮಂಗಳು. ಕ್ರಮದಿಂದ ಆಯಾಯ ಫಲಂಗಳನು ಕೊಡುತ್ತಂ ಇಹುದು, ಪಾಪಕರ್ಮಫಲವೆ ನರಕ, ಪುಣ್ಯಕರ್ಮಫಲವೆ ಸ್ವರ್ಗ. ಆ ಉಭಯ ಕರ್ಮವನತಿಗಳೆದ ಜ್ಞಾನ ಕರ್ಮದಿಂದ ಮುಕ್ತಿಯಹುದು. ಆ ಮೂರರಿಂದ ಹೊರತಾದ ಪ್ರಸಾಕರ್ಮದ ಫಲವೆ ಭಕ್ತಿ ಎಂದು ಶಿವಾಚಾರ್ಯರು ನಿರೂಪಿಸುವರಯ್ಯ ಶಾಂತವೀರೇಶ್ವರಾ
Transliteration Puṇyakarma, pāpakarma jñānakarma, prasādakarmavembī caturvīdha karmaṅgaḷu. Kramadinda āyāya phalaṅgaḷanu koḍuttaṁ ihudu, pāpakarmaphalave naraka, puṇyakarmaphalave svarga. Ā ubhaya karmavanatigaḷeda jñāna karmadinda muktiyahudu. Ā mūrarinda horatāda prasākarmada phalave bhakti endu śivācāryaru nirūpisuvarayya śāntavīrēśvarā