•  
  •  
  •  
  •  
Index   ವಚನ - 592    Search  
 
ಪ್ರಸಾದಿಗೆ ಅಗ್ನಿಯೇ ಅಂಗ, ಆ ಅಂಗಕ್ಕೆ ನಿರಹಂಕಾರವೆ ಹಸ್ತ, ಆ ಹಸ್ತಕ್ಕೆ ಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಇಚ್ಛಾಶಕ್ತಿ. ಆ ಶಕ್ತಿಗೆ ಶಿವಲಿಂಗ, ಆ ಲಿಂಗಕ್ಕೆ ವಿದ್ಯಾಕಲೆ, ಆ ಕಲೆಗೆ ನೇತ್ರಂದ್ರಿಯವೆ ಮುಖ. ಆ ಮುಖಕ್ಕೆ ಸುರೂಪು ಪದಾರ್ಥ. ಆ ಪದಾರ್ಥವನು ರೂಪು ರುಚಿ ತೃಪ್ತಿಕ್ರಿಯನರಿದು ‘ಶಿ’ಕಾರ ಮಂತ್ರಯುಕ್ತವಾಗಿ ಸಾವಧಾನ ಭಕ್ತಿಯಿಂದರ್ಪಿಸಿ ಆ ಸುರೂಪು ಪ್ರಸಾದವನು ಭೋಗಿಸಿ ಸುಖಿಸುತ್ತಿಹನಯ್ಯ ಪ್ರಸಾದಿಯು ಶಾಂತವೀರೇಶ್ವರಾ
Transliteration Prasādige agniyē aṅga, ā aṅgakke nirahaṅkārave hasta, ā hastakke mūrtisādākhya, ā sādākhyakke icchāśakti. Ā śaktige śivaliṅga, ā liṅgakke vidyākale, ā kalege nētrandriyave mukha. Ā mukhakke surūpu padārtha. Ā padārthavanu rūpu ruci tr̥ptikriyanaridu ‘śi’kāra mantrayuktavāgi sāvadhāna bhaktiyindarpisi ā surūpu prasādavanu bhōgisi sukhisuttihanayya prasādiyu śāntavīrēśvarā