ಪ್ರಾಣಲಿಂಗಿಗೆ ವಾಯುವೆ ಅಂಗ. ಆ ಅಂಗಕ್ಕೆ ಸುಮನವೆಂಬ ಹಸ್ತ.
ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ. ಆ ಸಾದಾಖ್ಯಕ್ಕೆ ಆದಿಶಕ್ತಿ.
ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿ ಕಲೆ.
ಆ ಕಲೆಗೆ ತ್ವಗಿಂದ್ರಿಯವೆ ಮುಖ,
ಆ ಮುಖಕ್ಕೆ ಸ್ಪರ್ಶನ ದ್ರವ್ಯ ಪದಾರ್ಥ.
ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು
‘ವ’ಕಾರ ಮಂತ್ರಯುಕ್ತವಾಗಿ ಅನುಭಾವ ಭಕ್ತಿಯಿಂದರ್ಪಿಸಿ
ಆ ಸುಸ್ಪರ್ಶನ ಪ್ರಸಾದವನು ಭೋಗಿಸಿ
ಸುಖಿಸುತ್ತಿಹನಯ್ಯ ಪ್ರಾಣಲಿಂಗಿಯು ಶಾಂತವೀರೇಶ್ವರಾ
Transliteration Prāṇaliṅgige vāyuve aṅga. Ā aṅgakke sumanavemba hasta.
Ā hastakke amūrtisādākhya. Ā sādākhyakke ādiśakti.
Ā śaktige jaṅgamaliṅga, ā liṅgakke śānti kale.
Ā kalege tvagindriyave mukha,
ā mukhakke sparśana dravya padārtha.
Ā padārthavanu rūpu ruci tr̥ptiyanaridu
‘va’kāra mantrayuktavāgi anubhāva bhaktiyindarpisi
ā susparśana prasādavanu bhōgisi
sukhisuttihanayya prāṇaliṅgiyu śāntavīrēśvarā