•  
  •  
  •  
  •  
Index   ವಚನ - 605    Search  
 
ಪಿಂಡ ಬ್ರಹ್ಮಾಂಡವು ಜ್ಞಾನಸ್ವರೂಪವಾಗಿ ಪ್ರಕಾಶಿಸುವುದು. ಆ ಜ್ಞಾನದಿಂದೆ ಹೊರತಾಗಿ ಆವುದು ಇಲ್ಲ. ಜ್ಞಾನಿಗಳಾದ ಲಿಂಗೈಕ್ಯರಿಗೆ ಮಾಯಾ ಪ್ರಪಂಚುಗಳಿಂದೇನು ಪ್ರಯೋಜನವಯ್ಯ? ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಮಹಾಲಿಂಗದಲ್ಲಿ ಐಕ್ಯವಾದ ಏಕಭಾಜನ ಉಳ್ಳ ಲಿಂಗೈಕ್ಯನು ಆ ಮಹಾಲಿಂಗದಲ್ಲಿ ಸಮರಸಭಾವದಿಂದ ಪರಮಾನಂದಸುಖದಲ್ಲಿ ಸುಖಿಯಾದ ಭೇದವು ಎಂತೆಂದೊಡೆ ಮುಂದೆ ‘ಸಹಭೋಜನಸ್ಥಲ’ವಾದುದು.
Transliteration Piṇḍa brahmāṇḍavu jñānasvarūpavāgi prakāśisuvudu. Ā jñānadinde horatāgi āvudu illa. Jñānigaḷāda liṅgaikyarige māyā prapan̄cugaḷindēnu prayōjanavayya? Śāntavīrēśvarā Sūtra: Ī prakāradinda mahāliṅgadalli aikyavāda ēkabhājana uḷḷa liṅgaikyanu ā mahāliṅgadalli samarasabhāvadinda paramānandasukhadalli sukhiyāda bhēdavu entendoḍe munde ‘sahabhōjanasthala’vādudu.