ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ
ವ್ರತಕ್ಕೆ ಬೀಜ ಮೊದಲಾಯಿತ್ತು.
ಭವಿಸಂಗ ಭವಿಪಾಕ ಅನ್ಯದೈವ
ಪೂಜಿಸುವವರ ದೂರಸ್ಥನಾಗಿರಬೇಕು,
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗವನರಿಯಬೇಕಾದಡೆ.
Transliteration Bhājanada kaṇṭhakke pāvaḍava bāsaṇisalāgi
vratakke bīja modalāyittu.
Bhavisaṅga bhavipāka an'yadaiva
pūjisuvavara dūrasthanāgirabēku,
ācārave prāṇavāda
rāmēśvaraliṅgavanariyabēkādaḍe.