ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ,
ಇದಿರಿಗೆ ಬಿನ್ನಾಣವ ತೋರುತ
ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ.
ಇದಿರು ಕಂಡಲ್ಲಿ ಹಾಕಿ,
ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ
ಭಂಡನ ಶೀಲ ಮೂರು ಕುಂಡೆಯೊಳಗಾಯಿತ್ತು.
ಇದರಂಗವ ಬಿಟ್ಟು, ಮನ ಲಿಂಗದಲ್ಲಿ ನಿಂದು,
ಧನ ಜಂಗಮದಲ್ಲಿ ಸಂದು,
ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ.
ಆತ ಮಂಗಳಮಯ ಮೂರುತಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
Transliteration Maṇṇamaḍakeya musukiṭṭu gannadalli nīru tumbi,
idirige binnāṇava tōruta
intī baṇṇa baccaṇeya śīlava nānoppe.
Idiru kaṇḍalli hāki,
ārū kāṇadaḍe tānoppikoṇḍippa
bhaṇḍana śīla mūru kuṇḍeyoḷagāyittu.
Idaraṅgava biṭṭu, mana liṅgadalli nindu,
dhana jaṅgamadalli sandu,
bandhanavillade ninda nijaikyana aṅgave sarvāṅgaśīla.
Āta maṅgaḷamaya mūruti
ācārave prāṇavāda rāmēśvaraliṅgavu tāne.