ಬಳಿಕ, ಜೈಮಿನಿ ಆಶ್ವಪಾದ ಕಣಾದರೆಂಬ
ಋಷೀಶ್ವರರಿಂ ಕ್ರಮದಿಂದುಕ್ತಮಾದ
ಪೂರ್ವಮಿಮಾಂಸೆ
ನ್ಯಾಯ ವೈಶೇಷಿಕವೆಂಬ ದೃಷ್ಟಾದೃಷ್ಟ
ಫಲಂಗಳುಳ್ಳ ವೈದಿಕಶಾಸ್ತ್ರಂಗಳು ಅವರಲ್ಲಿ
ಪೂರ್ವ ಮಿಮಾಂಸೆಯೆ ಉಪಕ್ರಮಾದಿ
ಷಡ್ವಿಧಲಿಂಗ ತಾತ್ಪರ್ಯದಿಂ
ವೇದವಾಕ್ಯವಿಚಾರಪೂರ್ವಮಾಗಿ ಜ್ಯೋತಿಷ್ಟೋಮ
ಯಾಗಾದಿ ಕರ್ಮಂ ವಿಧಿಸೂದಯ್ಯ
ಶಾಂತವೀರೇಶ್ವರಾ.
Transliteration Baḷika, jaimini āśvapāda kaṇādaremba
r̥ṣīśvarariṁ kramadinduktamāda
pūrvamimānse
n'yāya vaiśēṣikavemba dr̥ṣṭādr̥ṣṭa
phalaṅgaḷuḷḷa vaidikaśāstraṅgaḷu avaralli
pūrva mimānseye upakramādi
ṣaḍvidhaliṅga tātparyadiṁ
vēdavākyavicārapūrvamāgi jyōtiṣṭōma
yāgādi karmaṁ vidhisūdayya
śāntavīrēśvarā.