•  
  •  
  •  
  •  
Index   ವಚನ - 14    Search  
 
ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯದೀಕ್ಷೆಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯ ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳನು, ಮುಂದೆ ಭವಾಂತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋಧಿಸಿ ಸದ್ಯೋನ್ಮುಕ್ತಿಯನೆಯ್ದಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯ, ಶಾಂತವೀರಪ್ರಭುವೇ.
Transliteration Mattamā sādhāradīkṣeyu sabījadīkṣe nirbījadīkṣe cinmayadīkṣeyendu mūru [prakāradavu]. Avu yathākramadinda karmakāṇḍa bhaktikāṇḍa jñānakāṇḍagaḷalliya dīkṣe enisikombavu. Intendu kāraṇāgama pēḷūdayyā. Avaroḷu nirbījadīkṣe[ya sadyō nirvāṇadīkṣe endu] Ciraṁ nirvāṇadīkṣe endu eraḍu bhēdavu pēḷalpaḍuttihudu. Avaroḷu atyanta viraktanāda śiṣya[nu] anēka bhavaṅgaḷalli māḍalpaṭṭa san̄citakarmaṅgaḷanu, mattamā san̄citakarmarāśiyoḷaṁ āga tāḷdirda śarīraviḍidu anubhavisuttirda prārabdha karmaṅgaḷanu, munde bhavāntaraṅgaḷalli anubhavisaluḷḷa āgāmi karmaṅgaḷanu śōdhisi sadyōnmuktiyaneydisuva dīkṣe sadyōnirvāṇadīkṣe enisuvadayya, śāntavīraprabhuvē.