ಮತ್ತಮಾ
ಶಿಷ್ಯನು ಸಂಚಿತಕರ್ಮಗಳನು ಆಗಾಮಿಕರ್ಮಂಗಳನು ಕೆಡಿಸಿ,
ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ ಅನುಭವಿಸುತ್ತಿರ್ದ
ಪ್ರಾರಬ್ಧಕರ್ಮಂಗಳ ಭೋಗಾಂತರದಲ್ಲಿ
ಮುಕ್ತಿಯನೆಯ್ದಿಸುವ ದೀಕ್ಷೆ ಚಿರಂ ನಿರ್ವಾಣವೆನಿಸೂದು.
ಇಂತೆಂದು ಪಾರಮೇಶ್ವರತಂತ್ರ ಪೇಳೂದಯ್ಯ.
ಶಾಂತವೀರಪ್ರಭುವೇ.
Transliteration Mattamā
śiṣyanu san̄citakarmagaḷanu āgāmikarmaṅgaḷanu keḍisi,
dīkṣōttara kriyāvasāna pariyantaravāgi anubhavisuttirda
prārabdhakarmaṅgaḷa bhōgāntaradalli
muktiyaneydisuva dīkṣe ciraṁ nirvāṇavenisūdu.
Intendu pāramēśvaratantra pēḷūdayya.
Śāntavīraprabhuvē.