ಮೂಷಕ ಮಾರ್ಜಾಲ ಮಕ್ಷಿಕ
ಇವು ಮೊದಲಾದ ಸಕಲ ಜೀವಪ್ರಾಣಿಗಳಿಗೆ
ಎಲ್ಲಕ್ಕು ತನುವಿಂಗಾಚಾರ ಮನಕ್ಕರಿವು ಅರಿವಿಂಗೆ ವ್ರತವ
ಬಿಡದಿದ್ದಡೇನಾಯಿತ್ತಾದಡೆ ಎನಗದೆ ಭಂಗ.
ಲಿಂಗಕ್ಕು ಲಿಂಗವೆಂಬುದ ಅಂಗದ ಮೇಲೆ ಅವಧರಿಸದಿದ್ದಡೆ
ನಾ ಕೊಂಡ ಪಂಚಾಚಾರಕ್ಕೆ ದೂರ.
ಈ ಕಟ್ಟಿದ ತೊಡರ ಬಿಡಿಸುವುದಕ್ಕೆ
ಕಟ್ಟಾಚಾರಿಗಳಾರನು ಕಾಣೆ.
ಈ ಗುಣದ ದೃಷ್ಟ ಹಿಂದು ಮುಂದಿಲ್ಲ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೀಯವಲ್ಲದೆ.
Transliteration Mūṣaka mārjāla makṣika
ivu modalāda sakala jīvaprāṇigaḷige
ellakku tanuviṅgācāra manakkarivu ariviṅge vratava
biḍadiddaḍēnāyittādaḍe enagade bhaṅga.
Liṅgakku liṅgavembuda aṅgada mēle avadharisadiddaḍe
nā koṇḍa pan̄cācārakke dūra.
Ī kaṭṭida toḍara biḍisuvudakke
kaṭṭācārigaḷāranu kāṇe.
Ī guṇada dr̥ṣṭa hindu mundilla.
Ācārave prāṇavāda rāmēśvaraliṅgadalli līyavallade.