•  
  •  
  •  
  •  
Index   ವಚನ - 36    Search  
 
‘ಮಂತ್ರಪಿಂಡ ಹೃದಂಭೊಜೇ ವಾಸ ಮಂತ್ರಸ್ಯ ಭಾವತಃ|| ಆಹ್ವಾನಾತ್ಸಮ ಸಂಯುಕ್ತೇ ಲಂಗೇ ಪೂಜಾತಿಕಂ ಭವೇತ್’ ಎಂ[ಬುವ] ಮಂತ್ರಪಿಂಡವಪ್ಪ ತನ್ನ ಹೃದಯಕಮಲದಲ್ಲಿ ಆಹ್ವಾನದ ದೆಸೆಯಿಂದ ಸಂಯುಕ್ತವಾದ ಶಿವಲಿಂಗದಲ್ಲಿ ಮಂತ್ರಪತಿಯಪ್ಪ ಸರ್ಣವಾಸ ಮೊದಲಾಗಿ ಶಿವವಾಸ ಪರ್ಯಂತರವಾದ ವಾಸಮಂತ್ರಭಾವದಿಂಧ ಲಿಂಗಪೂಜೆಯೆ ಅಧಿಕವಪ್ಪುದು. ‘ಮಂತ್ರಲಿಂಗ ಶರೀರತಸ್ಯಾತ್ಸ ಉವ ಪರಮಃ ಶಿವಃ’ [ಎಂದು] ಅಂತರಂಗಾರ್ಚನೆಯ ಮಾಡುವ ಶುದ್ಧಶೈವನು ಮಂತ್ರಸ್ಥರೂಪವಾದ ಶರೀರಿಯಹನು; ಅಂತದರಿದಾತನು ಪರಮ ಶಿವನಪ್ಪನು ಎಂದು ಶಿವನು ಬೋಧಿಸುತ್ತಿರ್ದನು ಶಾಂತವೀರೇಶ್ವರಾ
Transliteration ‘Mantrapiṇḍa hr̥dambhojē vāsa mantrasya bhāvataḥ|| āhvānātsama sanyuktē laṅgē pūjātikaṁ bhavēt’ eṁ[buva] mantrapiṇḍavappa tanna hr̥dayakamaladalli āhvānada deseyinda sanyuktavāda śivaliṅgadalli mantrapatiyappa sarṇavāsa modalāgi śivavāsa paryantaravāda vāsamantrabhāvadindha liṅgapūjeye adhikavappudu. ‘Mantraliṅga śarīratasyātsa uva paramaḥ śivaḥ’ [endu] antaraṅgārcaneya māḍuva śud'dhaśaivanu mantrastharūpavāda śarīriyahanu; antadaridātanu parama śivanappanu endu śivanu bōdhisuttirdanu śāntavīrēśvarā