•  
  •  
  •  
  •  
Index   ವಚನ - 37    Search  
 
‘ಶುದ್ಧಶೈವಮಿತಿ ಪ್ರೋಕ್ತಂ| ವೀರಶೈವಮತಃ ಶ್ರುಣು’: ಈ ಪ್ರಕಾರದಿಂದ ಶುದ್ಧಶೈವವು ನಿರೂಪಿಸಲ್ಪಟ್ಟಿತ್ತು. ಅಲ್ಲಿಂಧ ಮೇಲೆ ವೀರಶೈವವನು ಕೇಳು: ‘ವೀರತಂತ್ರೇ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹೋತ್ತಮಂ|| ಸುಲಭಾದೇವ ಪೂಜಾ ಸು| ಸುಲಭಂ ಚ ಕ್ರಿಯಾವಹಂ’|| ಎಲೆ ದೇವಿಯೆ, ಸಮಸ್ತ ಶೈವಂಗಳೊಳಗೆ ವೀರಶೈವವೆ ಅತ್ಯುತ್ತಮವಾದುದು. ಆ ವೀರಶೈವ ಮಾಡುವ ಶಿವಪೂಜೆ ಲೇಸಾಗಿ ಸುಲಭವಾದಂಥಾದು. ಪೂಜಾದಿಗಳ ಮಾಟವು ಸುಲಭವಹಂಥಾದುದು. [ಹೀಗೆಂದು] ಈಶ್ವರನು ದೇವಿಯರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ
Transliteration ‘Śud'dhaśaivamiti prōktaṁ| vīraśaivamataḥ śruṇu’: Ī prakāradinda śud'dhaśaivavu nirūpisalpaṭṭittu. Allindha mēle vīraśaivavanu kēḷu: ‘Vīratantrē sarvēṣāmapi śaivānāṁ vīraśaivaṁ mahōttamaṁ|| sulabhādēva pūjā su| sulabhaṁ ca kriyāvahaṁ’|| ele dēviye, samasta śaivaṅgaḷoḷage vīraśaivave atyuttamavādudu. Ā vīraśaiva māḍuva śivapūje lēsāgi sulabhavādanthādu. Pūjādigaḷa māṭavu sulabhavahanthādudu. [Hīgendu] īśvaranu dēviyarige nirūpisuttirdanayya śāntavīrēśvarā