ವ್ರತನೇಮಿಯಾಗಿರ್ದಲ್ಲಿ, ಹಿರಿಯರು ಭಕ್ತರು
ಮಿಕ್ಕಾದ ಮನುಜರಲ್ಲಿ
ಸರಸಮೇಳ, ಪರಿಹಾಸಕಂಗಳಲ್ಲಿಂದ ಕೆಲದಲ್ಲಿ ನಿಂದಿತ್ತು.
ವ್ರತ ಹೋಯಿತ್ತು, ಆಚಾರ ಕೆಟ್ಟಿತ್ತು.
ಆಚಾರವೆ ಪ್ರಾಣವಾಗಿಪ್ಪ
ರಾಮೇಶ್ವರಲಿಂಗಕ್ಕೆ ದೂರವಾಯಿತ್ತು.
Transliteration Vratanēmiyāgirdalli, hiriyaru bhaktaru
mikkāda manujaralli
sarasamēḷa, parihāsakaṅgaḷallinda keladalli nindittu.
Vrata hōyittu, ācāra keṭṭittu.
Ācārave prāṇavāgippa
rāmēśvaraliṅgakke dūravāyittu.