ಬಸವಣ್ಣ   
  ವಚನ - 771     
 
ಬಾರದು, ಬಾರದು ಭಕ್ತಂಗೆ ಪರಧನ ಪರಸ್ತ್ರೀ ಬಾರದು, ಬಾರದು ವಿಷಯಿಗೆ ಪಶುಪತಿಯ ಬ್ರತವು. ಬಾರದು, ಬಾರದು ಭವಭಾರಿಗೆ ಕೂಡಲಸಂಗಮದೇವನ ಒಕ್ಕುದ ಕೊಳ್ಳಬಾರದು!