ಬಸವಣ್ಣ   
  ವಚನ - 847     
 
ಮಾಡುವರಿಲ್ಲ, ನೀ ಮಾಡದೆ ನಿಲ ಸಾಲೆ; ಬೇಡುವರಿಲ್ಲ, ನೀ ಬೇಡದೆ ನಿಲ ಸಾಲೆ; ಕೂಡುವರಿಲ್ಲ, ನೀ ಕೂಡದೆ ನಿಲ ಸಾಲೆ; ಕೂಡಲಸಂಗಮದೇವ ತಾನು ತಾನಾಗಿ ನೋಡದೆ ನಿಲ ಸಾಲೆ!