ಬಸವಣ್ಣ   
  ವಚನ - 1000     
 
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ, ತಿರಿದಡೆ ನೀಡದಂತೆ ಮಾಡುವಿರಿ, ನೀಡಿದಡೆ ನೆಲಕ್ಕೆ ಬೀಳುವಂತೆ ಮಾಡುವಿರಿ, ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ, ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ ಕೂಡಲಸಂಗಮದೇವಾ.