ಬಸವಣ್ಣ   
  ವಚನ - 1029     
 
ಅಸ್ತಿ ಭಾತಿಯೆಂಬ ಭಿತ್ತಿಯ ಮೇಲೆ, ಕ್ರೀ ನಾಮ ರೂಪವೆಂಬ ಚಿತ್ರ ಬರೆಯಿತ್ತು. ಇಲ್ಲದ ಭಿತ್ತಿಯ ಮೇಲೆ ಉಂಟೆಂಬ ಚಿತ್ರದಂತಿರ್ದಿತ್ತು. ಅದೆಂತೆಂದಡೆ; ʼಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಮ್ ಆದ್ಯತ್ರಯಂ ಬ್ರಹ್ಮರೂಪಮ್ ಮಾಯಾರೂಪಂ ತತೋದ್ವಯಮ್‌ʼ ಎಂದುದಾಗಿ- ಎನಗಿದೇ ಮಾಯೆಯಾಗಿ ಕಾಡಿತ್ತು, ಕೂಡಲಸಂಗಮದೇವಾ.