ಬಸವಣ್ಣ   
  ವಚನ - 1036     
 
ಆತ್ಮನ ನಿಜವನರಿಯದು ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ ಎಂತಿರ್ದಂತೆ ಪೂಜೆ ನೋಡಾ ! ಭೋಗಿಸಿದುದೆಲ್ಲವು ಶಿವಾರ್ಪಿತ, ಶರಣ ರುಚಿಸಿದುದೆಲ್ಲವು ಪ್ರಸಾದ, ಶರಣನರಿದುದೆಲ್ಲವು ಪರಬ್ರಹ್ಮ, ಶರಣ ನುಡಿದುದೆಲ್ಲವು ಪರತತ್ವ, ಶರಣ ತಾನೆ ಕೂಡಲಸಂಗಮದೇವ.