ವ್ಯಾಪಾರವನೆ ಬಿಟ್ಟು ತಾಪತ್ರಯವನೆ ಹಿಂಗಿ,
ಲೋಕದ ಹಂಗನೆ ಹರಿದು ಬೇಕು ಬೇಡೆಂಬುವನೆ ನೂಕಿ,
ತಾನು ವಿವೇಕಿಯಾದಲ್ಲದೆ,
ಜ್ಯೋತಿಯ ಬೆಳಗ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
Transliteration Vyāpāravane biṭṭu tāpatrayavane hiṅgi,
lōkada haṅgane haridu bēku bēḍembuvane nūki,
tānu vivēkiyādallade,
jyōtiya beḷaga kāṇabāradendaru,
nam'ma appaṇṇapriya cennabasavaṇṇana śaraṇaru.